ಬಲೆ ದೈ ನಡ್ಕ - ಬಜಪೆ

ಬಲೆ ದೈ ನಡ್ಕ - ಬಜಪೆ - 16.06.2024 ಮಂಗಳೂರು: ಜೈ ತುಲುನಾಡ್ ಮತ್ತು ಯುವವಾಹಿನಿ ಬಜಪೆ ಘಟಕದ ಸಹಕಾರದಿಂದ ಯಶಸ್ವಿಯಾಗಿ ನಡೆದ ‘ಬಲೆ ದೈ ನಡ್ಕ’ ಕಾರ್ಯಕ್ರಮ ದಿನಾಂಕ 16/06/2024ರಂದು ನಡೆಯಿತು. ಜೈ ತುಲುನಾಡ್ (ರಿ.) ಮಂಗಳೂರು ಘಟಕ ಮತ್ತು ಯುವ ವಾಹಿನಿ ಬಜಪೆ ಘಟಕದ ವತಿಯಿಂದ ಜೂನ್ 16ರ ಭಾನುವಾರದಂದು ಬಜಪೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀ ಕ್ಷೇತ್ರ ದೊಡ್ಡಿಕಟ್ಟ ಸ್ವಯಂಭೂಲಿಂಗೇಶ್ವರ ದೇವಸ್ಥಾನದಲ್ಲಿ “ಬಲೆ ದೈ ನಡ್ಕ” ಎಂಬ ಕಾರ್ಯಕ್ರಮವು ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಬಜ್ಪೆ ಇಲ್ಲಿನ ವೈದ್ಯಾಧಿಕಾರಿ ಡಾ: ಶಂಕರ್ ನಾಗ್ ಹಾಗೂ ಜೈ ತುಲುನಾಡ್ (ರಿ.) ಮಂಗಳೂರು ಘಟಕದ ಅಧ್ಯಕ್ಷರಾದ ಮತ್ತು ಯುವವಾಹಿನಿ (ರಿ) ಬಜಪೆ ಘಟಕದ ಅಧ್ಯಕ್ಷರಾದ ನಿರಂಜನ್ ಕರ್ಕೇರರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೂಲ್ಕಿ ಮೂಡಬಿದ್ರೆ ಮಂಡಲ ರೈತ ಮೋರ್ಚಾದ ಅಧ್ಯಕ್ಷರಾದ ರಾಜೇಶ್ ಅಮೀನ್, ಶ್ರೀ ಕ್ಷೇತ್ರ ದೊಡ್ಡಿಕಟ್ಟ ಸ್ವಯಂಭೂಲಿಂಗೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರು ಲೋಕೇಶ್ ಅಮೀನ್, ಕಾರ್ಯದರ್ಶಿ ದಿನಕರ್ ಅಮೀನ್ ಸದಸ್ಯರು ವಿಜಯ ಅಮೀನ್, ಯುವವಾಹಿನಿ (ರಿ) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಯಾದ ಪ್ರಸಾದ್ ಪಾಲನ್, ಜೈ ತುಲುನಾಡ್ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಪೂಂಜ, ಸ್ಥಾಪಕ ಸದಸ್ಯರಾದ ಕಿರಣ್ ತುಲುವೆ, ರಕ್ಷಿತ್ ಕೋಟ್ಯಾನ್, ಜೈ ತುಲುನಾಡ್ (ರಿ) ಕುಡ್ಲ ಘಟಕದ...