ಬೆನ್ನಿ ಬದ್‌ಕ್ ಮೂಲಕ ಕೃಷಿ ಬದುಕಿನ ಪರಿಚಯ
ಜುಲೈ 21 : ಕಿನ್ನಿಗೋಳಿಯ ತಾಳಿಪಾಡಿಗುತ್ತು ಲಲಿತಾ ಶೆಟ್ಟಿ ಇವರ ಮನೆಯ ಗದ್ದೆಯಲ್ಲಿ ಜೈ ತುಳುನಾಡು ರಿಜಿಸ್ಟರ್ ಸಂಘಟನೆಯ ಬೆನ್ನಿ ಬದ್ಕ್ ಎಂಬ ಕಾರ್ಯಕ್ರಮವು ನಡೆಯಿತು ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹೊಸ ತಲೆಮಾರಿನ ಜನತೆಗೆ ಕೃಷಿ ಬದುಕನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಗೊತ್ತಿಲ್ಲದವರಿಗೆ ನೇಜಿ ನೆಡುವುದನ್ನು ಕಲಿಸಿಕೊಡಲಾಯಿತು. ಜೊತೆಗೆ ಕೃಷಿ ಬಗ್ಗೆ ಮಾಹಿತಿಯನ್ನು ನೀಡಲಾಯಿತು ಬಿಡುವಿನ ಸಮಯದಲ್ಲಿ ಗದ್ದೆಯಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಳಿಪಾಡಿ ಗುತ್ತು ಲಲಿತ ಶೆಟ್ಟಿ, ಸಂಘದ ಅಧ್ಯಕ್ಷರಾದ ಉದಯ್ ಪೂಂಜಾ ತಾಳಿಪಾಡಿ ಗುತ್ತು, ಜೊತೆ ಕಾರ್ಯದರ್ಶಿಯಾದ ಪೃಥ್ವಿ ತುಲುವೆ, ಜೊತೆ ಕೋಶಾಧಿಕಾರಿಯದ ನಿಶೀಲ್ ಶೆಟ್ಟಿ ಬೇಲಾಡಿ, ತುಳು ಲಿಪಿ ಸಮಿತಿಯ ಸಹ ಮೇಲ್ವಿಚಾರಕರಾದ ಚಿರಶ್ರೀ, ಸ್ಥಾಪಕ ಸಮಿತಿಯ ಸದಸ್ಯರಾದ ಕಿರಣ್ ತುಲುವೆ, ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೀವಿತಾ ಕುತ್ತಾರ್, ಅಶ್ವಿತಾ, ಮಹೇಶ್ ಬೇಲಾಡಿ, ಕುಡ್ಲ ಘಟಕದ ಅಧ್ಯಕ್ಷರಾದ ನಿರಂಜನ್ ಕರ್ಕೇರ, ಉಪಾಧ್ಯಕ್ಷರಾದ ಮನೀಶ್ ಕುಮಾರ್, ಕಾರ್ಯದರ್ಶಿಯಾದ ಚೇತನ್ ಅಂಚನ್, ಜೊತೆ ಕಾರ್ಯದರ್ಶಿಯಾದ ರಾಜೇಶ್ ಶೆಟ್ಟಿ, ಮಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ದುರ್ಗಾಪ್ರಸಾದ್ ರೈ, ಸಹ ಸಂಘಟನಾ ಕಾರ್ಯದರ್ಶಿಯಾದ ಲತಾ ಡಿಂಪಲ್, ಸಂಘದ ಸದಸ್ಯರು, ತಾರಿಪಾಡಿ ಜವನೆರೆ ಕಲ ದ ಸದಸ್ಯರು ಉಪಸ್ಥಿತರಿದ್ದರು.
Comments
Post a Comment