ಜೈ ತುಲುನಾಡ್(ರಿ.) ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿಯ ಸಹಕಾರದೊಂದಿಗೆ "ಆಟಿದ ಕೂಟ" ಕಾರ್ಯಕ್ರಮ

ಜುಲಾಯಿ 28ನೇ ಆದಿತ್ಯವಾರ ಜೈ ತುಲುನಾಡ್(ರಿ.) ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿಯ ಸಹಕಾರದೊಂದಿಗೆ ಮಂಜೇಶ್ವರದ ಹೊಸಂಗಡಿಯಲ್ಲಿರುವ ಕೇರಳ ತುಳು ಅಕಾಡೆಮಿಯಲ್ಲಿ ಆಟಿದ ಕೂಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ದಲ್ಲಿ ಜೈ ತುಲುನಾಡ್(ರಿ.) ಕಾಸರಗೋಡು ಇದರ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದರು ಕೇರಳ ತುಳು ಅಕಾಡೆಮಿಯ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೈ ತುಲುನಾಡ್(ರಿ.) ಸಂಘದ ಹಿರಿಯ ಸದಸ್ಯ ಶ್ರೀ ಉಮೇಶ್ ಸಾಲಿಯಾನ್ ಸಿರಿಯಾ ಇವರು ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಶ್ರೀ ಜಯಾನಂದ ಇವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜೈ ತುಲುನಾಡ್(ರಿ.) ಕೇಂದ್ರ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ವಿನೋದ ಪ್ರಸಾದ್ ರೈ ಹಾಗೂ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಚಿತ್ರಕ್ಷಿ ಇವರು ಶುಭಾಶಯಗಳನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಕಾರ್ತಿಕ್ ಕೆ ಎನ್ ಸ್ವಾಗತಿಸಿ ಸಹ ಕಾರ್ಯದರ್ಶಿ ಶ್ರೀಮತಿ ಪವಿತ್ರ ಧನ್ಯವಾದ ಅರ್ಪಿಸಿದರು. ಶ್ರೀ ಜಗನ್ನಾಥ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಯಜ್ಞೇಶ್, ಪ್ರವೀಶ್, ಚೈತ್ರ,ಮೇಘನಾ ಕೆ. ಎನ್ ಪೆರ್ಲ ಸಹಕರಿಸಿದರು. ಬಳಿಕ ಆಟಿ ತಿಂಗಳಿನ ವಿವಿಧ ತಿಂಡಿ ತಿನಸುಗಳನ್ನು ಹಂಚಲಾಯಿತು.

Comments

Popular posts from this blog

MEMBERSHIP RENEW DETAILS

JAI TULUNAD (R.) MEMBERSHIP DETAILS

ಜೈ ತುಲುನಾಡ್ (ರಿ.) ಕೂಟದ ಬಗ್ಗೆ ತೆರಿಯೊನ್ಲೆ