LITERATURE WING

 ಜೈ ತುಲುನಾಡ್ (ರಿ.) ಸಾಹಿತ್ಯ ಆಸಕ್ತರಿಗಾಗಿಯೇ ಸಾಹಿತ್ಯ ಪರವಾದ ಅಂಗಸಂಸ್ಥೆಯೊಂದನ್ನು ರಚಿಸಲು ಉದ್ದೇಶಿಸಿದೆ. ಅದರ ಸಂಪೂರ್ಣ ವಿವರವನ್ನು ಈ ಕೆಳಗಿನಂತಿದೆ:


*ಅಂಗಸಂಸ್ಥೆಯ ಹೆಸರು:*



*ಉದ್ದೇಶ:*


1. ತುಳು ಭಾಷೆಯ ಸಾಹಿತ್ಯಿಕ ಪರಂಪರೆಯ ಸಂರಕ್ಷಣೆ, ಪ್ರಚಾರ ಮತ್ತು ಬೆಳವಣಿಗೆಗೆ ಪ್ರೇರೇಪಿಸುವುದು.

2. ಯುವ ಜನತೆಯನ್ನು ತುಳು ಸಾಹಿತ್ಯ ಆಸಕ್ತಾರನ್ನಾಗಿಸುವುದು.

3. ತುಳು ಸಾಹಿತ್ಯದ ಅಧ್ಯಯನ, ಚರ್ಚೆ, ವಿಮರ್ಶೆ ಹಾಗೂ ಬರವಣಿಗೆಯ ಅಭ್ಯಾಸಕ್ಕೆ ವೇದಿಕೆ ಒದಗಿಸುವುದು.

4. ಪ್ರತಿಭಾವಂತ ಯುವ ಲೇಖಕರನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುವುದು.

5. ಭವಿಷ್ಯದ ತುಳು ಸಾಹಿತ್ಯದ ನಾಯಕತ್ವವನ್ನು ರೂಪಿಸುವುದು.

6. ತುಳು ಪುಸ್ತಕ ಮುದ್ರಣ

7. ಹೊಸ ಸಾಹಿತಿಗಳನ್ನು ಬೆಳಕಿಗೆ ತರುವುದು.


*ಚಟುವಟಿಕೆಗಳು:*


• *ತುಳು ಸಾಹಿತ್ಯ ತರಗತಿಗಳು* – ಓದುವಿಕೆ, ಸಾಹಿತ್ಯ ರಚನೆ,  ಅಧ್ಯಯನ.


• *ಲೇಖನ ಕಾರ್ಯಾಗಾರಗಳು:*  ಕವಿಗೋಷ್ಠಿ, ಕಥೆ ರಚನೆ, ಕವಿತೆ ರಚನೆ, ವಿಮರ್ಶೆೆ, ಬರವಣಿಗೆ.


• *ಸಾಹಿತ್ಯ ಸ್ಪರ್ಧೆಗಳು:* – ಪ್ರಬಂಧ, ಕವನ, ಕಥೆ, ತಾತ್ವಿಕ ಚರ್ಚೆಗಳು.

 

• *ಯುವ ಸಾಹಿತಿಗಳ ವೇದಿಕೆ* – ವಿದ್ಯಾರ್ಥಿ ಸಾಹಿತ್ಯ ಸೃಷ್ಟಿಗೆ ಪ್ರೋತ್ಸಾಹ.


• *ಪುಸ್ತಕ ಪರಿಚಯ ಮತ್ತು ಪಠನವಿಮರ್ಶಾ ಸಭೆ:*

 ತುಳು ಕೃತಿಗಳ ಅಧ್ಯಯನ.


• *ತುಳು ಸಾಹಿತ್ಯ ದಿನಾಚರಣೆ:* ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನಗಳು  – ವರ್ಷದಲ್ಲಿ ಕನಿಷ್ಠ 2-3 ಕಾರ್ಯಕ್ರಮಗಳು.


*ಸದ್ಯಸತ್ವ:*


*A. ಅರ್ಹತೆ:*

• ತುಳು ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಯುವ ಸಮುದಾಯ.


*B. ವಾರ್ಷಿಕ ಸದಸ್ಯತ್ವ ಶುಲ್ಕ:*

• (ಆರಂಭಿಕ ಹಂತದಲ್ಲಿ ಉಚಿತ)



*ಆಡಳಿತ ವ್ಯವಸ್ಥೆ:*

* ಸಾಮಾನ್ಯ ಸದಸ್ಯರು

* ತಾಲೂಕು ಸಾಹಿತ್ಯ ಸಮಿತಿಗಳು

* ಜಿಲ್ಲಾ ಮಟ್ಟದ ಸಮಿತಿಗಳು

* ಕೇಂದ್ರ ಮಟ್ಟದ ಸಮಿತಿಗಳು

* *ಜೈ ತುಲುನಾಡ್ (ರಿ.)* ನಿಂದ ಆಯ್ಕೆಯಾದ ಇಬ್ಬರು ಪ್ರತಿನಿಧಿಗಳು



*ಕಾರ್ಯವೈಖರಿ:*


• **ಸಾಹಿತ್ಯ ಶಾಖೆಗಳು:** – ವಿವಿಧ ಮಟ್ಟದ ಸಾಹಿತ್ಯ ಶಾಖೆಗಳನ್ನು ಆರಂಭಿಸುವುದು, ಸಮಿತಿ ರಚಿಸುವುದು


• *ಸಾಹಿತ್ಯ ಸಭೆ:*, ತಿಂಗಳಿಗೆ 1 ಸಾಮಾನ್ಯ ಸಭೆ, ವರ್ಷಕ್ಕೆ 2 ವಿಶೇಷ ಸಭೆಗಳು, 1 ವಾರ್ಷಿಕ ಮಹಾಸಭೆ.


• *ಸಾಹಿತ್ಯ ಕಾರ್ಯಕ್ರಮಗಳು:* ಕಥಾ-ಕಾವ್ಯ ವಾಚನ, ವಿಮರ್ಶಾ ಚರ್ಚೆಗಳು.


• *ಸಾಂಸ್ಕೃತಿಕ ಜವಾಬ್ದಾರಿ:* ಭಾಷಾ ಸಂರಕ್ಷಣೆಗಾಗಿ ಪಠ್ಯಾಗೋಷ್ಠಿಗಳು, ಪುಸ್ತಕ ಪ್ರಕಾಶನ.


• **ಸಾಹಿತ್ಯ ಶಿಬಿರಗಳು:* ಯುವ ಸಾಹಿತಿಗಳಿಗೆ ಬರವಣಿಗೆ, ಸಂಪಾದನೆ, ಭಾಷಾ ಕೌಶಲ್ಯ ತರಬೇತಿ.


• *ಸಾಹಿತ್ಯ ಸಂವಹನ:* ವೆಬ್‌ಸೈಟ್, ವಾಟ್ಸಾಪ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯತೆ.


• *ತುಳು ಚಿಂತನೆ:*  ಲೇಖಕರಲ್ಲಿ ತುಳು ಪರ ದೃಷ್ಠಿಕೋನ ಬೆಳೆಸುವುದು.



 *ವಿಶೇಷತೆ:*

• ರಾಜಕೀಯರಹಿತ, ಸಾಹಿತ್ಯಮೂಲ್ಯ ಆಧಾರಿತ ವೇದಿಕೆ

• ಜಾತಿ-ಧರ್ಮ ಮೀರಿ ಸರ್ವರಿಗೂ ತೆರೆಯಲ್ಪಟ್ಟ ಸಮಾನ ಅವಕಾಶ

• ವಿದ್ಯಾರ್ಥಿ ಸಾಹಿತ್ಯದ ಬೆಳವಣಿಗೆಗೆ ವಿಶೇಷ ಗಮನ




ಧನ್ಯವಾದಗಳು

*ಜೈ ತುಲುನಾಡ್ (ರಿ.)*

Comments

Popular posts from this blog

MEMBERSHIP RENEW DETAILS

JAI TULUNAD (R.) MEMBERSHIP DETAILS

ಜೈ ತುಲುನಾಡ್ (ರಿ.) ಕೂಟದ ಬಗ್ಗೆ ತೆರಿಯೊನ್ಲೆ